ಒಂದು ಪುಟ್ಟ ಸಂಸಾರ, ಗಂಡ - ಹೆಂಡತಿ - ಮಗ - ಮಗಳು ನಾಲ್ಕು ಜನರ ಚೊಕ್ಕ ಸಂಸಾರ.
1992 ರಲ್ಲಿ 200 ರೂ ಗಳಿಂದ ಆರಂಭಿಸಿದ ಜೀವನ ಯಾರ ನೆರವೂ ಇಲ್ಲದೇ ಸ್ವಾಭಿಮಾನದಿಂದ,
ಹಗಲಿರುಳು ದುಡಿದು ಹಂತ ಹಂತವಾಗಿ ಪೈಸೆ ಪೈಸೆ ಸೇರಿಸಿ, 2000 ನೇ ಇಸವಿಯಲ್ಲಿ ಸ್ವಂತಕ್ಕೆ ಮನೆ ಮಾಡಿ,
ಗಂಡನಿಗೆ ತಿಳಿಯದೇ ಹೆಂಡತಿಯ ಚೀಟಿ ವ್ಯವಹಾರದಲ್ಲಿ ಸಾಲಗಾರಳಾಗಿ, ಕಷ್ಟಪಟ್ಟು ಪೈಸೆ ಪೈಸೆ ಕೂಡಿಟ್ಟು ಕೊಂಡಿದ್ದ ಮನೆ ಮಾರಿ ಸಾಲಮುಕ್ತರಾದರು.
2001 ರಿಂದ ಮತ್ತೆ ಎರಡು ಮಕ್ಕಳ ಜೊತೆ ನಾಲ್ಕು ಜನರ ಪುಟ್ಟದಾದ ಚೊಕ್ಕದಾದ ಒಬ್ಬರಿಗೊಬ್ಬರು ಬಿಟ್ಟಿಲಾರದಂತಹ ಗಂಡ-ಹೆಂಡಿರ ದಾಂಪತ್ಯ, ಜೀವನದಲ್ಲಿ ಎಷ್ಟೇ ಕಷ್ಟ ಬಂದಿದ್ದರೂ, ಸಹ ಸ್ವಂತ ಮನೆಯನ್ನು ಕಳೆದಿದ್ದರೂ ಸಹ ಅವರ ಪ್ರೀತಿಯಲ್ಲಿ ಒಂದಿಷ್ಟು ಲೋಪವಿರಲಿಲ್ಲ.
ಮತ್ತೆ ಬಾಡಿಗೆ ಮನೆಯಲ್ಲಿ ಹೊಸ ಜೀವನ ಪ್ರಾರಂಭ
ಪೈಸೆ ಪೈಸೆ ಕೂಡಿಟ್ಟು ಪುನಃ ಜೀವನ ಕಟ್ಟುವ ಛಲ. ಗಂಡ ಹೆಂಡತಿಯರಿಬ್ಬರೂ ಹಗಲು ರಾತ್ರಿ ದುಡಿದು ಹಂತ ಹಂತವಾಗಿ ಕಳೆದಿದ್ದ ಹಣವನ್ನು ಮರಳಿ ಪಡೆಯಲು ಪ್ರಾರಂಭಿಸಿದ್ದರು.
ಗಂಡ - ಒಂದು ಕಡೆ ದಿನಗೂಲಿ ಕೆಲಸ ಮಾಡಿಕೊಂಡು, ದೇಹವನ್ನು ದಂಡಿಸಿಕೊಂಡು ದುಡಿಯುತ್ತಿದ್ದರೆ.
ಹೆಂಡತಿ - ಬಾಡಿಗೆ ಮನೆಯಲ್ಲಿ ನಾಲ್ಕಾರು ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಅಡುಗೆ ಮಾಡಿ ಹೊಟ್ಟೆತುಂಬಾ ಊಟ ಬಡಿಸಿ, ತಮ್ಮ ಜೀವನಕ್ಕೂ ಒಂದಷ್ಟು ವರಮಾನ ಮಾಡಿಕೊಳ್ಳುವ ಕಾಯಕ.
ಇದರ ಜೊತೆಗೆ ಇಬ್ಬರು ಮಕ್ಕಳ ವಿದ್ಯಾಭ್ಯಾಸ.
ಎಸ್.ಟಿ.ಡಿ. ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ 20 ವರ್ಷದ ಹುಡುಗನೊಬ್ಬ ಮೂರು ಹೊತ್ತು ಊಟಕ್ಕೆ ಬರುತ್ತಿದ್ದ.
ಅವರ ಜೀವನದಲ್ಲಿ ಅವನು ಅನೊನ್ಯವಾಗಿ ಮನೆ ಮಗನಂತೆ ಬೆಳೆದ. ತನ್ನ ಊಟವನ್ನು ಉಚಿತ ಮಾಡಿಕೊಂಡ, ಜೊತೆಗೆ ತನ್ನ ತಮ್ಮನನ್ನು ಊರಿನಿಂದ ಕರೆತಂದು ಅದೇ ಮನೆಯಲ್ಲಿ ನಿಂತ. 12 ವರ್ಷ ಎಂತದ್ದೆ ಕಷ್ಟ ಬಂದರೂ ಜೊತೆಯಲ್ಲಿದ್ದ ಆ ಜೋಡಿಯ ಪ್ರೀತಿಯ, ದಾಂಪತ್ಯವನ್ನು ನೋಡಿದ ಆ ಯುವಕ ತನ್ನ ವಿಕೃತ ಮನಸ್ಸಿನಿಂದ ಗಂಡ ಹೆಂಡತಿಯರ ನಡುವೆ ವಿರಸ ತಂದಿಡಲು ಆರಂಭಿಸಿದ, ಅನ್ನ ತಿಂದ ಮನೆಯನ್ನೇ ಛಿದ್ರ ಮಾಡಲು ನಿಂತ, ಅನ್ನ ನೀಡಿದ ತಾಯಿ ಸಮಾನರಾದ ಹೆಂಡತಿಯನ್ನೇ ತನ್ನವಳನ್ನಾಗಿ ಮಾಡಿಕೊಳ್ಳಲು ಸಂಚು ರೂಪಿಸಿದ. ದಿನ ಕಳೆದಂತೆ ಆ ಮನೆಯ ಸಂಪೂರ್ಣ ಜವಾಬ್ದಾರಿಯ ಹಿಡಿತ ತನ್ನ ಕೈಯಲ್ಲಿಟ್ಟುಕೊಂಡ, ಗಂಡ ಹೆಂಡತಿಯರ ನಡುವೆ ಬಿರುಕು ಹೆಚ್ಚುವಂತೆ ಮಾಡಿ ಅದರಿಂದ ವಿಕೃತ ಖುಷಿ ಅನುಭವಿಸುತ್ತಿದ್ದ. ತನ್ನ ಸ್ನೇಹಿತರ ಜೊತೆ ಆ ಮನೆಯ ಯೊಡತಿಯ ಜೊತೆ ತನ್ನ ಸಂಬಂಧವಿದೆ ಅಂತ ಹೇಳಿಕೊಂಡು ತಿರುಗತೊಡಗಿದೆ. ತನ್ನ ಮೊಬೈಲಿನಿಂದ ಐ ಲವ್ ಯೂ ಮೆಸೆಜ್ಗಳು, ಅಶ್ಲೀಲ ಮೆಸೆಜ್ಗಳು ಕಳುಹಿಸಿಕೊಂಡು ವಿಕೃತ ಸುಖ ಅನುಭವಿಸತೊಡಗಿದ. " ಒಂದು ದಿನ ಜನರ ಮುಂದೆ ಆ ಮನೆಯ ಯೊಡತಿಯನ್ನು ಹಿಡಿದು ಗಂಡನ ಎದುರೇ "ಇವಳನ್ನು ನಾನು ಇಟ್ಟುಕೊಂಡಿದ್ದೇನೆ ಏನೋ ಇವಾಗ " ಅಂತ ಗಂಡನನ್ನು ಹೊಡೆಯಲು ಬಂದ. ಗಂಡ ಹೆಂಡತಿಯರನ್ನು ಸಂಪೂರ್ಣವಾಗಿ ಬೇರ್ಪಡಿಸಲು ಯಶಸ್ವಿಯೂ ಆದ, ಅವರ 12 ವರ್ಷದ ದಾಂಪತ್ಯ ಚೂರು ಚೂರಾಯಿತು.
ಅವರು ಪೈಸೆ ಪೈಸೆ ಕೂಡಿಟ್ಟ ಹಣವನ್ನು ತನ್ನ ತಮ್ಮನ ಕಾಲೇಜಿಗೆ, ತನ್ನ ತಂಗಿಯ ಮದುವೆಗೆ ಅಂತ ಬಳಸಿಕೊಂಡು " ಮೂರು ಹೊತ್ತು ಅನ್ನ ತಿನ್ನಲು ಬಂದವನು ಅವರ ಅಷ್ಟೂ ಹಣವನ್ನು ಬಳಸಿಕೊಂಡ" ಜೊತೆಗೆ ಸಾಲವನ್ನು ಮಾಡಿಸಿ, ಮತ್ತೆ ಸಾಲಗಾರರನ್ನಾಗಿ ಮಾಡಿದ. ಅಲ್ಲಿಗೆ ಒಂದು ಹಂತದಲ್ಲಿ ಆ ಸಂಸಾರವನ್ನು ಸಂಪೂರ್ಣ ಹೊಡೆಯಲು ಯಶಸ್ವಿಯೂ ಆದ.
ಆ ಮನೆಯ ಒಡೆಯ ತನ್ನ ಸಂಸಾರ ಹೀಗಾಯಿತಲ್ಲ ಅಂತ ಒಳೊಗೊಳಗೇ ಕೊರಗಲು ನಿಂತ, ತನ್ನ ಹೆಂಡತಿಯ ಬಳಿ ಮಾತಾನಾಡಲು ಬಿಡುತ್ತಿರಲಿಲ್ಲ. ತನ್ನ ಮದುವೆಯ ದಿನ ಆಗಸ್ಟ್ 2 ರಂದು ತನ್ನ ಹೆಂಡತಿಯೊಂದಿಗೆ ಮಾತಾನಾಡಲು ಹೋಗಿ, ತಮ್ಮ ಹಿಂದಿನ ಪ್ರೀತಿಯ ನೆನಪುಗಳನ್ನು ಜ್ಞಾಪಿಸಿ, ತನ್ನ ಹೆಂಡತಿಯೊಂದಿಗೆ ಬೆರೆಯಲು ಹೊರಟಾಗ ದಿಢೀರನೇ ಪ್ರತ್ಯಕ್ಷನಾದ ಆ ಯುವಕ ಅವಳ ತಂಟೆಗೆ ಬಂದರೆ ಹುಷಾರ್ ಇವಳು ನನ್ನವಳು ಎಂದು ಧಮಕಿ ಹಾಕಿದ, ನಂತರ 18ನೇ ಆಗಸ್ಟ್ ರಂದು ರಾತ್ರಿ ತನ್ನ ಹೆಂಡತಿಯ ಬಳಿ ಮಾತಾನಾಡಲು ಹೋದಾಗ ಎಷ್ಟು ಸಾರಿ ಹೇಳುವುದು ಅವಳ ತಂಟೆಗೆ ಬರಬೇಡ ಅಂತ ಹೇಳಿ ಹಿಂದಿನಿಂದ ಬಂದ ಆ ಯುವಕ ವಿಷವಿದ್ದ ಬಾಟಲಿಯನ್ನು ಆ ಮನೆಯೊಡನ ಬಾಯಿಯಲ್ಲಿ ತುರುಕಿ, ಕುಡಿಸಿಬಿಟ್ಟ. ಮೊದಲೇ ಜೀವನ ಬೇಸತ್ತು ಹೋಗಿದ್ದ ಆ ಮನೆಯೊಡೆಯ ಪ್ರತಿಭಟಿಸಲಿಲ್ಲ. ಸಾವಿಗೆ ಹೆದರಲಿಲ್ಲ. ಆದರೆ ವಿಷ ಗಂಟಲಲ್ಲಿ ಇಳಿಯುತ್ತಿದ್ದಂತೆ ತಾನು ಬದುಕಬೇಕು ಅಂತ ಅನ್ನಿಸಿದೆ. ತನ್ನ ಹೆಂಡತಿಗೆ ಗೋಗೆರೆದಿದ್ದಾನೆ. ".........ನನ್ನ ಕಾಪಾಡು ಅಂತ ಆ ಹೆಂಡತಿ ಕಾಪಾಡಲು ಓಡಿ ಬಂದಾಗ ಯುವಕ ಆ ಹೆಂಡತಿಯನ್ನು ದೂರ ತಳ್ಳಿ, ಆ ಮನೆಯೊಡೆಯನ ಕತ್ತು ಹಿಚುಕುವ ಕೆಲಸದ ಮಾಡಿದ್ದಾನೆ. ಅವರ ಕೂಗಾಟಕ್ಕೆ ಅಕ್ಕ ಪಕ್ಕದವರು ಓಡಿ ಬಂದಾಗ ವಿಧಿಯಿಲ್ಲದೇ ಆಸ್ಪತ್ರೆಗೆ ಸೇರಿಸಿದ್ದಾರೆ. 11 ದಿನ ಕೋಮಾ ದಲ್ಲಿದ್ದ ಆ ಮನೆಯ ಒಡೆಯ ವಿಷ ದೇಹ ಸೇರಿ ಕಾಲಿನ ಸ್ವಾಧೀನ ಕಳೆದುಕೊಂಡಿತ್ತು. ತನ್ನ ಹೆಂಡತಿ ಮಕ್ಕಳನ್ನು ದೂರ ಮಾಡಿಕೊಂಡು ದೂರ ಉಳಿದ. ಆ ಮನೆಯ ಒಡೆಯನನ್ನು ತನ್ನ ಹೆಂಡತಿಯನ್ನು ನನ್ನ ಹೆಂಡತಿ ನನ್ನ ಹೆಂಡತಿ ಅಂತ ಹೇಳಿ 12 ವರ್ಷದ ಜೋಡಿಯನ್ನು ಬೇರ್ಪಡಿಸಿದ ಯುವಕ, ಮತ್ತೊಂದು ಹೆಣ್ಣಿನ ಜೊತೆ ಮದುವೆಯಾಗಿ ಆರಾಮವಾಗಿ ಸಂಸಾರ ಮಾಡಿಕೊಂಡಿದ್ದಾನೆ. ಇಷ್ಟಕ್ಕೂ ಅವನು ಸಾಧಿಸಿದ್ದೇನು? ಯಾವ ಉದ್ದೇಶಕ್ಕೆ ಅವರ ಪುಟ್ಟ ಸಂಸಾರೆದೊಳಕ್ಕೆ ಬಂದನೋ, ಅವರ ಸಂಸಾರ ಒಡೆದ, ಅವರ ಹಣ ಬಳಸಿಕೊಂಡ, ಗಂಡನನ್ನು ಸಾಯಿಸುವ ಮಟ್ಟಿಗೆ ಹೋಗಿ ಅಂಗವಿಕಲನನ್ನಾಗಿ ಮಾಡಿದ. ಬಹಳ ದೂರ ಹೋಗುವಂತೆ ಮಾಡಿದ. ನಂತರ ಬೇರೆ ಹೆಣ್ಣಿನ ಜೊತೆ ಮದುವೆಯೂ ಆದ. ನೂರಾರು ಆಸೆಗಳನ್ನು ಕಟ್ಟಿಕೊಂಡು ಏಳುಬೀಳುಗಳ ನಡುವೆ ಪುಟ್ಟ ಸಂಸಾರ ಮಾಡಿಕೊಂಡಿದ್ದ ಆ ಸಂಸಾರಕ್ಕೆ ಕಂಟಕನಾಗಿ, ಅನ್ನ ತಿಂದ ಮನೆಯನ್ನೇ ಹೊಡೆದು, ಅನ್ನ ನೀಡಿದ ಕೈಯನ್ನೇ ತನ್ನ ಸ್ವಾರ್ಥಕ್ಕೆ ಬಳಸಿಕೊಂಡ, ಶಾಶ್ವತ ಅಂಗವಿಕಲನನ್ನಾಗಿ ಮಾಡಿಬಿಟ್ಟ. ಎರಡು ಮಕ್ಕಳ ಜೀವನಕ್ಕೆ ಕಂಟಕ ಪ್ರಾಯನಾಗಿ, ತಂದೆಯಿಲ್ಲದಂತೆ ಮಾಡಿದ. ಅನ್ಯಾಯವಾಗಿ ಒಂದು ಚಿಕ್ಕ ಚೊಕ್ಕ ಸಂಸಾರವನ್ನು ಹಾಳು ಮಾಡಿ, ಇತ್ತ ಒಂದು ಕಡೆ ಅಂಗವಿಕಲನಾಗಿ ಗಂಡ ಬೇರೆಲ್ಲೋ ವಾಸ ಮಾಡುತ್ತಿದ್ದರೆ, ಇತ್ತ ಆ ಹೆಂಡತಿ ಅತಂತ್ರವಾಗಿ ಜೀವಿಸುತ್ತಿದ್ದರೆ, ಮತ್ತೊಂದು ಕಡೆ ಎರಡು ಮಕ್ಕಳು, ತಮ್ಮ ಮುಂದಿನ ಭವಿಷ್ಯದಲ್ಲಿ ಹೀಗಾಯಿತಲ್ಲ ಅಂತ ಕೊರಗುವಂತೆ ಮಾಡಿದ
ಯಾವುದೇ ಕಾರಣಕ್ಕೂ ಗಂಡ ಹೆಂಡತಿಯರೂ ಒಬ್ಬರನ್ನೊಬ್ಬರು ಮತ್ತೆ ಒಂದಾಗಲಾರದಂತೆ ಮಾಡಿಬಿಟ್ಟ.
ಇಂತಹ ಪಾಪಿಗೆ ಯಾವ ರೀತಿಯ ಶಿಕ್ಷೆ...............

No comments:
Post a Comment